ಯು ಸರ್ಟಿಫಿಕೆಟ್ ಪಡೆದ ‘ಮಿ|| ಮೊಮ್ಮಗ ೨೭ ರಂದು ಬಿಡುಗಡೆ
Posted date: 19 Thu, May 2016 – 12:10:03 PM

ಸುಮುಖ ಎಂಟರ್‌ಪ್ರೈಸಸ್ ಲಾಂಛನದಲ್ಲಿ, ರಘುಗೌಡ ನಿರ್ಮಾಣದ ಮಿ||ಮೊಮ್ಮಗ ಚಿತ್ರಕ್ಕೆ  ಸೆನ್ಸಾರ್ ಮಂಡಳಿಯು ಯು ಸರ್ಟಿಫಿಕೆಟ್ ನೀಡಿದ್ದು ಉತ್ತಮ ಕೌಟುಂಬಿಕ ಚಿತ್ರ ಎಂದು ತಿಳಿಸಿದ್ದಾರೆ.  ಚಿತ್ರವು ಇದೇ ತಿಂಗಳು ೨೭ ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರ ತಾತ ಮತ್ತು  ಮೊಮ್ಮಗನ ಬಾಂಧವ್ಯದ ಕಥಾವಸ್ತುವುಳ್ಳ ಈ ಚಿತ್ರವು ಕಳೆದ ವರ್ಷ ತಮಿಳಿನಲ್ಲಿ ಯಶಸ್ವೀ ಚಿತ್ರಗಳಲ್ಲೊಂದಾದ ಮಂಜಾಪೈ ಚಿತ್ರದ ರೀಮೇಕ್.  ಮೂಲ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ರಾಘವನ್, ಕನ್ನಡದಲ್ಲಿ ಕಥೆ-ಚಿತ್ರಕತೆ-ನಿರ್ದೇಶನ ಮಾಡುತ್ತಿದ್ದಾರೆ. ಸಂಭಾಷಣೆ - ಮಳವಳ್ಳಿ ಸಾಯಿಕೃಷ್ಣ, ಸಾಹಿತ್ಯ- ನಾಗೇಂದ್ರ ಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ಸಂಗೀತ-ರಘುನಂದನ್, ಸಂಕಲನ - ದೇವ ರಾಘವನ್, ಕಲೆ-ಸೋಮಶೇಖರ್, ಸಾಹಸ - ಶಿವು, ನೃತ್ಯ-ದಿನೇಶ್, ಸಹನಿರ್ದೇಶನ-ನವರಸನ್, ನಿರ್ವಹಣೆ - ದಾಡಿ ರಮೇಶ್, ತಾರಾಗಣದಲ್ಲಿ - ರವಿ, ಓವಿಯಾ (ಕಿರಾತಕ ಚಿತ್ರದ ನಾಯಕಿ), ರಂಗಾಯಣ ರಘು, ಅವಿನಾಶ್, ಕುರಿ ಪ್ರತಾಪ್, ಮುಂತಾದವರಿದ್ದಾರೆ.
 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed